ಮಹಿಳೆಯರಿಗೆ ಉಚಿತ ಗ್ಯಾಸ್ ಕನೆಕ್ಷನ್: ಸರ್ಕಾರದ ಭರ್ಜರಿ ಯೋಜನೆ!

ದಿನನಿತ್ಯದ ಜೀವನದಲ್ಲಿ LPG ಗ್ಯಾಸ್ ಸಿಲಿಂಡರ್‌ಗಳ ಬೆಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಮಾನ್ಯ ಕುಟುಂಬಗಳಿಗೆ ಉಚಿತ ಗ್ಯಾಸ್ ಕನೆಕ್ಷನ್ ಹಾಗೂ ಸಬ್ಸಿಡಿ ಸಿಲಿಂಡರ್‌ಗಳನ್ನು ಒದಗಿಸುತ್ತಿವೆ. Free Gas Connection Scheme 2025 ಅಡಿ ಸಾವಿರಾರು ಮಹಿಳೆಯರಿಗೆ ನೇರ ಪ್ರಯೋಜನ ತಲುಪುತ್ತಿದೆ.

ಉಜ್ವಲ ಯೋಜನೆ (PM Ujjwala Yojana): 12 ಕೋಟಿಗೂ ಹೆಚ್ಚು ಮಹಿಳೆಯರಿಗೆ ಲಾಭ

2016ರಲ್ಲಿ ಆರಂಭವಾದ ಪ್ರಧಾನಮಂತ್ರಿ ಉಜ್ವಲ ಯೋಜನೆ (PMUY) ಇಂದು ದೇಶದಾದ್ಯಂತ 12 ಕೋಟಿಗೂ ಹೆಚ್ಚು ಬಿಪಿಎಲ್ ಕುಟುಂಬಗಳ ಮಹಿಳೆಯರಿಗೆ ಉಚಿತ LPG ಗ್ಯಾಸ್ ಕನೆಕ್ಷನ್ ನೀಡಿದೆ.
ಈ ಯೋಜನೆಯಡಿಯಲ್ಲಿ:

  • ಉಚಿತ ಗ್ಯಾಸ್ ಕನೆಕ್ಷನ್
  • ವರ್ಷಕ್ಕೆ 12 ಸಬ್ಸಿಡಿ ಸಿಲಿಂಡರ್‌ಗಳ ಸೌಲಭ್ಯ
  • ಅಡುಗೆ ಚುಲಿ, ಪೈಪ್‌ ಸೇರಿದಂತೆ ಅಗತ್ಯ ಉಪಕರಣಗಳು ಉಚಿತ

ಈ ಯೋಜನೆ ಅಡುಗೆಗಾಗಿ ಇಂಧನದ ಕೊರತೆಯಿಂದ ಬಳಲುತ್ತಿದ್ದ ಕುಟುಂಬಗಳಿಗೆ ದೊಡ್ಡ ಆಶಾಕಿರಣವಾಗಿದೆ.

ಯಾರ್ಯಾರು ಅರ್ಹರು? | PM Ujjwala Yojana Eligibility Kannada

ಈ ಯೋಜನೆಗೆ ಕೇವಲ ಮಹಿಳೆಯರು ಮಾತ್ರ ಅರ್ಹರು.

ಅರ್ಹತೆ ಮಾನದಂಡಗಳು:

  • ಭಾರತೀಯ ಪೌರತ್ವ ಹೊಂದಿರಬೇಕು
  • 18 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು
  • BPL ಕುಟುಂಬದವರು
  • PM Awas Yojana (Gramin) ಫಲಾನುಭವಿಗಳು
  • Antyodaya Anna Yojana (AAY) ಕುಟುಂಬಗಳು
  • SC / ST ಸಮುದಾಯದವರು
  • ಕುಟುಂಬದಲ್ಲಿ ಈಗಾಗಲೇ LPG ಕನೆಕ್ಷನ್ ಇರಬಾರದು

ಅರ್ಜಿಗೆ ಅಗತ್ಯ ದಾಖಲೆಗಳು | Required Documents

ಅರ್ಜಿ ಸಲ್ಲಿಸಲು ಬೇಕಾಗುವ ಮುಖ್ಯ ದಾಖಲೆಗಳು:

  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ವಿಳಾಸ ಪ್ರಮಾಣಪತ್ರ
  • ಜಾತಿ ಪ್ರಮಾಣಪತ್ರ
  • ಬ್ಯಾಂಕ್ ಖಾತೆ ವಿವರಗಳು
  • ಪಾಸ್‌ಪೋರ್ಟ್ ಗಾತ್ರದ ಫೋಟೋ

ಈ ದಾಖಲೆಗಳ ಆಧಾರದಲ್ಲಿ KYC ಪರಿಶೀಲನೆ ನಡೆಯುತ್ತದೆ.

ಉಜ್ವಲ ಯೋಜನೆಗೆ ಆನ್‌ಲೈನ್‌ನಲ್ಲಿ ಹೇಗೆ ಅರ್ಜಿ ಹಾಕುವುದು? | PMUY Apply Online

Step-by-step Online Application Process:

  1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ 👉 pmuy.gov.in
  2. Ujjwala 2.0 Connection ಆಯ್ಕೆ ಮಾಡಿ
  3. ನಿಮ್ಮಿಗೆ ಬೇಕಾದ ಗ್ಯಾಸ ಕಂಪನಿ ಆಯ್ಕೆ (HP, Indane, BPCL)
  4. ಹೆಸರು, ಮೊಬೈಲ್, ಇಮೇಲ್ ನಮೂದಿಸಿ Registration ಮಾಡಿ
  5. Login ಮಾಡಿದ ನಂತರ–
    • ರಾಜ್ಯ
    • ಜಿಲ್ಲೆ
    • ಪಿನ್‌ಕೋಡ್
    • ಕುಟುಂಬದ ವಿವರಗಳು
    • ಬ್ಯಾಂಕ್ ಖಾತೆ
      ಸಲ್ಲಿಸಿ
  6. ಅಂತಿಮವಾಗಿ ಅರ್ಜಿ ಪ್ರಿಂಟ್ ತೆಗೆದುಕೊಂಡು ಹತ್ತಿರದ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ

₹500 ಕ್ಕೆ LPG ಗ್ಯಾಸ್ ಸಿಲಿಂಡರ್ – ದೊಡ್ಡ ಉಳಿತಾಯ!

ಸರ್ಕಾರ ಉಚಿತ ಕನೆಕ್ಷನ್ ಜೊತೆಗೆ ಗ್ಯಾಸ್ ಸಿಲಿಂಡರ್‌ನ್ನು ಕೇವಲ ₹500 ರ ಸಬ್ಸಿಡಿ ದರದಲ್ಲಿ ನೀಡುತ್ತಿದೆ. ಸಾಮಾನ್ಯ ಕುಟುಂಬಗಳಿಗೆ ಇದು ದೊಡ್ಡ ಮಟ್ಟದ ಹಣದ ಉಳಿತಾಯ ಮಾಡುತ್ತದೆ.

ಯೋಜನೆಯ ಪ್ರಮುಖ ಲಾಭಗಳು | Benefits

  • ಮಹಿಳೆಯರಿಗೆ ಸಂಪೂರ್ಣ ಉಚಿತ LPG ಕನೆಕ್ಷನ್
  • ಗ್ಯಾಸ್ ಸಿಲಿಂಡರ್‌ಗಳ ಮೇಲೆ ₹500 ವಿಶೇಷ ರಿಯಾಯಿತಿ
  • ಹೊಗೆ ರಹಿತ ಅಡುಗೆ – ಆರೋಗ್ಯ ಉತ್ತಮ
  • ಅಡುಗೆ ಸಮಯ, ಶ್ರಮ ಕಡಿಮೆ
  • ಗ್ರಾಮೀಣ ಹಾಗೂ ಬಡ ಕುಟುಂಬಗಳಿಗೆ ನೇರ ನೆರವು

Free Gas Connection Scheme 2025 ಮಹಿಳೆಯರಿಗೆ ಗೃಹಬಳಕೆಯ ಪ್ರಮುಖ ನೆರವನ್ನು ನೀಡುವ ಅತ್ಯಂತ ಮುಖ್ಯ ಯೋಜನೆ. ಅರ್ಹತೆಯಿರುವ ಮಹಿಳೆಯರು ತಕ್ಷಣವೇ PMUY ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು.

 

Author

  • Ishu

    Ishwar is the Founder and Chief Editor of Jobvidhya.com, a popular Kannada news and technology website. With over three years of experience in digital journalism, he focuses on delivering accurate, simple, and useful information to readers. His key areas of interest include regional news, technology updates, and culture-related content, presented in an easy-to-understand manner.

    📧 Email: kannadaneeds.net@gmail.com

Leave a Comment